Saturday, September 22, 2007

ಜನನ ನಿಯಂತ್ರಿಸುವ ಕಾಂಡೋಮ್ ಹಾಕಿ ರಂಗಕ್ಕೂ ಲಗ್ಗೆ!


ಜಲಂಧರ್, ಸೆಪ್ಟೆಂಬರ್ 05 : ಭಾರತೀಯರಿಗೂ ಕಾಂಡೋಮ್ ಗಳಿಗೂ ನಂಟು ಬೆಳೆದಾಗ ಮಾತ್ರ, ಜನಸಂಖ್ಯೆ ಹತೋಟಿಯಲ್ಲಿರುತ್ತದೆ! ಆ ಮಾತು ಬಿಡಿ, ಕಾಂಡೋಮ್ ಈಗ ಕ್ರೀಡಾರಂಗಕ್ಕೂ ಲಗ್ಗೆ ಹಾಕಿದೆ.


ಹಾಕಿ ಸ್ಟಿಕ್‌ಗಳ ರಕ್ಷಣೆಗೆ ಇದು ಬಳಕೆಯಾಗುತ್ತಿದೆ!ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸಿದ್ದರಿಂದಲೇ ಭಾರತೀಯರು, ಸಿಂಹಳೀಯರೊಂದಿಗಿನ ಮ್ಯಾಚ್‌ನಲ್ಲಿ 20 ಮತ್ತು 0 ಅಂತರದಿಂದ ಗೆದ್ದದ್ದು ಎಂಬ ಗುಮಾನಿ ಉಂಟಾಗಿದೆ. ಈ ಬಗ್ಗೆ ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲದಿದ್ದರೂ ಹಾಕಿ ಸ್ಟಿಕ್‌ಗಳಿಗೆ ಕಾಂಡೋಮ್ ಬಳಸುವುದರಿಂದ ಬಹಳಷ್ಟು ಪ್ರಯೋಜನ ಇದೆ ಎಂಬುದು ಕೆಲವರ ವಾದ.


ಅಂದ ಹಾಗೆ, ಭಾರತ ತಂಡ ಉಪಯೋಗಿಸುವ ಹಾಕಿ ಸ್ಟಿಕ್‌ಗಳನ್ನು ಜಲಂಧರ್ ನಲ್ಲಿನ ಆರ್ ಕೆ ಸ್ಪೋರ್ಟ್ ಸಂಸ್ಥೆ ತಯಾರಿಸುತ್ತದೆ. ಆ ಸಂಸ್ಥೆಯ ಎಂಡಿ ಸಂಜಯ್ ಕೋಹ್ಲಿಯವರೆ ‘ಕಾಂಡೋಮ್ ಪ್ರಯೋಗದ’ ಸೂತ್ರಧಾರಿ.


ಹಾಕಿ ಸ್ಟಿಕ್‌ನ ಹುಕ್ ಗೊತ್ತಲ್ಲ, ಸ್ಟಿಕ್‌ನ ಬಹು ಮುಖ್ಯಭಾಗ ಅದೆ. ಅದನ್ನು ಮಲ್ಬರಿ ಗಿಡದ ಕಾಂಡದಿಂದ ತಯಾರಿಸುತ್ತಾರೆ. ಅದನ್ನು ಪ್ರತ್ಯೇಕ ಯಂತ್ರಗಳಿಂದ ಬಗ್ಗಿಸಿ ಹುಕ್‌ಗೆ ಹ್ಯಾಂಡಿಲ್ ಅಳವಡಿಸುತ್ತಾರೆ. ಅದು ಎಷ್ಟೇ ಬಲಿಷ್ಟವಾಗಿದ್ದರೂ ಬಲು ಬೇಗನೆ ಹಾಳಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಬ್ಯಾಟ್ ತಯಾರಿಕಾ ಸಂಸ್ಥೆ, ಹಲವಾರು ಪ್ರಯೋಗಗಳನ್ನು ಮಾಡಿಯಾಯ್ತು. ಮುಂಚೆ ಹುಕ್ಕಿಗೆ ಪ್ಲಾಸ್ಟಿಕ್ ಬಳಸುತ್ತಿದ್ದರು. ಅದು ನಿರೀಕ್ಷಿಸಿದಷ್ಟು ಫಲಕಾರಿಯಾಗಲಿಲ್ಲ. ಈಗ ನೇರವಾಗಿ ಕಾಂಡೋಮ್‌ಗಳನ್ನು ಬಳಸಲಾಗುತ್ತಿದೆ. ಹಾಗಾಗಿ ಸ್ಟಿಕ್‌ಗಳೂ ಬಹಳಷ್ಟು ಕಾಲ ಬಾಳಿಕೆ ಬರುತ್ತಿವೆಯಂತೆ. ಹೀಗಂತ ಹೇಳುತ್ತಾರೆ ಸಂಜಯ್ ಕೋಹ್ಲಿಯವರು. ಅಂದಹಾಗೆ ಇದರ ಪೇಟೆಂಟ್ ಕೂಡ ಪಡೆಯಲಾಗಿದೆಯಂತೆ.


(ದಟ್ಸ್ ಕನ್ನಡ ವಾರ್ತೆ)

Saturday, September 8, 2007

ಇದು ವಿಜ್ಞಾನ ದೇಗುಲ ಕೈ ಮುಗಿದು ಒಳಗೆ ಬಾ

ವಿಜ್ಞಾನ ತಂತ್ರಜ್ಞಾನ ಕಬ್ಬಿಣದ ಕಡಲೆ ಎಂಬ ಮಾತನ್ನು ಸುಳ್ಳು ಮಾಡುವ ಆಸೆ ನನ್ನದು.